- ಪ್ರಮುಖ ಕಂಟೆಂಟ್ಗೆ ಹೋಗಿ
- ಸ್ಕ್ರೀನ್ ರೀಡರ್ ಅಕ್ಸೆಸ್
- ಬೀಟಾ ಆವೃತ್ತಿ
ಕ್ರೌಡ್‌ಫಂಡಿಂಗ್ ಹೂಡಿಕೆ ವಂಚನೆ
ಹೊಸ ಯುಗದ ಟ್ರ್ಯಾಪ್: "ಒಂದು ಸ್ಟಾರ್ಟ್‌ಅಪ್ ಅನ್ನು ಬೆಂಬಲಿಸುವುದು" ಮತ್ತು "ಒಂದು ಸಾಮಾಜಿಕ ಉದ್ದೇಶವನ್ನು ಬೆಂಬಲಿಸುವುದು" ಒಂದು ಹಗರಣವನ್ನು ಬೆಂಬಲಿಸಿದಂತಾದಾಗ
ನಕಲಿ ಕ್ರೌಡ್‌ಫಂಡಿಂಗ್ ಹೂಡಿಕೆ ವೇದಿಕೆಗಳ ಹೆಚ್ಚುತ್ತಿರುವ ಬೆದರಿಕೆಹೊಸ ಯುಗದ ಟ್ರ್ಯಾಪ್: "ಒಂದು ಸ್ಟಾರ್ಟ್‌ಅಪ್ ಅನ್ನು ಬೆಂಬಲಿಸುವುದು" ಮತ್ತು "ಒಂದು ಸಾಮಾಜಿಕ ಉದ್ದೇಶವನ್ನು ಬೆಂಬಲಿಸುವುದು" ಒಂದು ಹಗರಣವನ್ನು ಬೆಂಬಲಿಸಿದಂತಾದಾಗ
ನಕಲಿ ಕ್ರೌಡ್‌ಫಂಡಿಂಗ್ ಹೂಡಿಕೆ ವೇದಿಕೆಗಳ ಹೆಚ್ಚುತ್ತಿರುವ ಬೆದರಿಕೆ
ಇದು ಸಾಮಾನ್ಯವಾಗಿ ಭಾವನಾತ್ಮಕ ಆಕರ್ಷಣೆ ಅಥವಾ ಅದ್ಭುತ ಕಲ್ಪನೆಯೊಂದಿಗೆ ಪ್ರಾರಂಭವಾಗುತ್ತದೆ.
ಹೊಸ ಯುಗದ ಸ್ಟಾರ್ಟಪ್ ಒಂದು ತನ್ನನ್ನು“ಭಾರತದ ಮುಂದಿನ ಯುನಿಕಾರ್ನ್” ಎಂದು ಹೇಳಿಕೊಳ್ಳುತ್ತಿದೆ
ಒಂದು ಸಾಮಾಜಿಕ ಉದ್ಯಮವು ಹೇಳುತ್ತದೆ,“ಒಂದೇ ದೇಣಿಗೆಯಲ್ಲಿ ಬದುಕನ್ನೇ ಬದಲಾಯಿಸಬಹುದು” ಎಂದು
ಸ್ಲೀಕ್ ಕ್ರೌಡ್‌ಫಂಡಿಂಗ್ ಪುಟ ಭರವಸೆ ನೀಡುತ್ತದೆಸಣ್ಣ ಹೂಡಿಕೆದಾರರಿಗೆ ಇಕ್ವಿಟಿಮತ್ತು“ಫಂಡಿಂಗ್ ಮುಗಿದ ನಂತರ 10 ಪಟ್ಟು ಲಾಭ.”
ಎಲ್ಲವೂ ನಿಜವಾಗಿ ಕಾಣುತ್ತದೆ - ಲೋಗೋ, ಟೆಸ್ಟಿಮೋನಿಯಲ್‌ಗಳು, ಸಂಸ್ಥಾಪಕರ ಫೋಟೋಗಳು.
ನೀವು ಹೊಸತನ ಅಥವಾ ಸಾಮಾಜಿಕ ಉದ್ದೇಶಕ್ಕೆ ಬೆಂಬಲಿಸುತ್ತಿದ್ದೀರಿ ಎಂದು ನಂಬಿ, ಸಣ್ಣ ಮೊತ್ತವನ್ನು ಹೂಡಿಕೆ ಮಾಡುತ್ತೀರಿ.
ವಾರಗಳ ನಂತರ, ವೆಬ್‌ಸೈಟ್ ಮಾಯವಾಗುತ್ತದೆ, ಫೋನ್ ನಂಬರ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ - ಮತ್ತು ನಿಮ್ಮ ನಂಬಿಕೆಯೂ ಕುಸಿಯುತ್ತದೆ.
ನಕಲಿ ಕ್ರೌಡ್‌ಫಂಡಿಂಗ್ ಹೂಡಿಕೆ ವೇದಿಕೆಯಿಂದ ನೀವು ವಂಚನೆಗೊಳಗಾಗಿದ್ದೀರಿ.
ಕ್ರೌಡ್‌ಫಂಡಿಂಗ್ ಹೂಡಿಕೆ ವಂಚನೆ ಎಂದರೇನು?
ಕ್ರೌಡ್‌ಫಂಡಿಂಗ್ ಎಂಬುದು ವ್ಯಕ್ತಿಗಳಿಗೆ ಬಿಸಿನೆಸ್ ಉದ್ಯಮಗಳು, ಸ್ಟಾರ್ಟಪ್‌ಗಳು ಅಥವಾ ಸಾಮಾಜಿಕ ಕಾರಣಗಳಿಗಾಗಿ ಆನ್‌ಲೈನ್‌ನಲ್ಲಿ ಹಣವನ್ನು ಸಂಗ್ರಹಿಸಲು ಅನುಮತಿಸುತ್ತದೆ - ನಿಜವಾದ ಕ್ರೌಡ್‌ಫಂಡಿಂಗ್ ಶಕ್ತಿಶಾಲಿ ಸಾಧನವಾಗಿದ್ದರೂ, ವಂಚಕರು ಅದನ್ನು ಹೂಡಿಕೆದಾರರು ಮತ್ತು ದಾನಿಗಳನ್ನು ಮೋಸಗೊಳಿಸಲು ಬಳಸುತ್ತಾರೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ:
-
ಅವರು ನಕಲಿ ವೆಬ್‌ಸೈಟ್‌ಗಳು ಅಥವಾ ಸೋಶಿಯಲ್ ಮೀಡಿಯಾ ಪುಟಗಳನ್ನು ಸೃಷ್ಟಿಸಿ, ದತ್ತಿ ಉದ್ದೇಶಗಳಿಗಾಗಿ ಇರುವ ಸ್ಟಾರ್ಟಪ್‌ಗಳಂತೆ ತೋರಿಸಿಕೊಳ್ಳುತ್ತಾರೆ.
-
ಅವರು ಹೆಚ್ಚಿನ ಇಕ್ವಿಟಿ ಆದಾಯ, ಐಪಿಒಗಳಿಗೆ ಮುಂಚಿತ ಅಕ್ಸೆಸ್ ಅಥವಾ ಲಾಭ-ಹಂಚಿಕೆ ಭರವಸೆ ನೀಡುತ್ತಾರೆ.
-
ಅವರು ಸಾವಿರಾರು ಜನರಿಂದ ಸಣ್ಣ ಸಣ್ಣ ಮೊತ್ತಗಳನ್ನು ಸಂಗ್ರಹಿಸುತ್ತಾರೆ - ಈ ಮೊತ್ತಗಳು ವೈಯಕ್ತಿಕವಾಗಿ ಕಡೆಗಣಿಸುವಷ್ಟು ಕಡಿಮೆ ಎನಿಸಿದರೂ, ಒಟ್ಟುಗೂಡಿಸಿದಾಗ ಗಮನಾರ್ಹವಾಗಿ ದೊಡ್ಡ ಮೊತ್ತವಾಗಿರುತ್ತದೆ.
-
ಸಾಕಷ್ಟು ಹಣವನ್ನು ಸಂಗ್ರಹಿಸಿದ ನಂತರ ಅವುಗಳು ಕಾಣೆಯಾಗುತ್ತವೆ.
ಸಾಮಾನ್ಯವಾಗಿ, ಈ ಸ್ಕ್ಯಾಮರ್‌ಗಳು ನಂಬಿಕೆಯನ್ನು ಗಳಿಸಲು ಭಾವನಾತ್ಮಕ ವಿಷಯ ಮತ್ತು ತುರ್ತುಸ್ಥಿತಿ ಕಾರಣಗಳನ್ನು ಬಳಸುತ್ತಾರೆ - ಸಾಮಾಜಿಕ ಉದ್ದೇಶಗಳ ಹೃದಯಸ್ಪರ್ಶಿ ಕಥೆಗಳೊಂದಿಗೆ ಸ್ಟಾರ್ಟಪ್‌ನ ಉತ್ಸಾಹವನ್ನು ಜೋಡಿಸುತ್ತಾರೆ.
ಆತಂಕಕಾರಿ ಟ್ರೆಂಡ್
ಸೈಬರ್‌ಕ್ರೈಮ್ ವರದಿಗಳ ಪ್ರಕಾರ, ಸೋಶಿಯಲ್ ಮೀಡಿಯಾ, ಟೆಲಿಗ್ರಾಮ್ ಗ್ರೂಪ್‌ಗಳು ಮತ್ತು ವಾಟ್ಸಾಪ್ ಚಾನೆಲ್‌ಗಳಲ್ಲಿ ನಕಲಿ ಕ್ರೌಡ್‌ಫಂಡಿಂಗ್ ಸಾಮಾಜಿಕ ಅಭಿಯಾನಗಳಿಗೆ ನೂರಾರು ಭಾರತೀಯರು ಹಣವನ್ನು ಕಳೆದುಕೊಂಡಿದ್ದಾರೆ.
ಅಷ್ಟೊಂದು ಪ್ರಮುಖವಾಗಿಲ್ಲದಿದ್ದರೂ, ಅನೇಕ ಇಕ್ವಿಟಿ ಆಧಾರಿತ ಸ್ಟಾರ್ಟಪ್ ಹಗರಣಗಳು ಸಹ ಸಾಂದರ್ಭಿಕವಾಗಿ ಸಂಭವಿಸುತ್ತವೆ. ಅತ್ಯಂತ ಸಾಮಾನ್ಯ ಬಲಿಪಶುಗಳು? ಸಣ್ಣ ರಿಟೇಲ್ ಹೂಡಿಕೆದಾರರು - "ಉತ್ತಮ ಚಿಂತನೆಗೆ ಸಹಾಯ ಮಾಡುವಲ್ಲಿ ಏನು ಹಾನಿ?" ಎಂದುಕೊಂಡು ₹5,000 - ₹50,000 ಹಣ ನೀಡುವವರು
ಈ ಸ್ಕ್ಯಾಮ್‌ಗಳು ನಿಮ್ಮನ್ನು ಹೇಗೆ ಆಕರ್ಷಿಸುತ್ತವೆ
-
ಭಾವನಾತ್ಮಕ ಕಥೆ ಹೇಳುವುದು: "ನಾವು ಸುಸ್ಥಿರತೆಗಾಗಿ ಹೋರಾಡುತ್ತಿರುವ ಮಹಿಳಾ ನೇತೃತ್ವದ ಸ್ಟಾರ್ಟಪ್ ಆಗಿದ್ದೇವೆ."
-
ನಕಲಿ "ಇನ್ವೆಸ್ಟರ್ ಅಪ್ಡೇಟ್‌ಗಳನ್ನು" ತೋರಿಸುವ ವೃತ್ತಿಪರವಾಗಿ-ಕಾಣುವ ವೆಬ್‌ಸೈಟ್‌ಗಳು ಮತ್ತು ಡ್ಯಾಶ್‌ಬೋರ್ಡ್‌ಗಳು
-
"ಇಎಸ್‌ಜಿ", "ಇಂಪ್ಯಾಕ್ಟ್ ಇನ್ವೆಸ್ಟಿಂಗ್, "ಪ್ರಿ-ಸೀಡ್ ರೌಂಡ್", "ಏಂಜಲ್ ಪಾರ್ಟಿಸಿಪೇಶನ್" ಮುಂತಾದ ಬಜ್‌ವರ್ಡ್‌ಗಳ ಬಳಕೆ.
-
ಪ್ರಿ-ಐಪಿಒ ಅಥವಾ ಆರಂಭಿಕ-ಹಂತದ ಇಕ್ವಿಟಿಗೆ "ವಿಶೇಷ ಅಕ್ಸೆಸ್" ಕ್ಲೈಮ್ ಮಾಡುವ ಮೆಸೇಜ್‌ಗಳು.
-
ನೋಂದಾಯಿತ ಬಿಸಿನೆಸ್ ಘಟಕಗಳಿಗೆ ಬದಲಾಗಿ ವೈಯಕ್ತಿಕ ಅಕೌಂಟ್‌ಗಳು ಅಥವಾ ವಾಲೆಟ್‌ಗಳಿಗೆ ಹಣ ಟ್ರಾನ್ಸ್‌ಫರ್ ಮಾಡುವ ಕೋರಿಕೆಗಳು.
ಕ್ರೌಡ್‌ಫಂಡಿಂಗ್ ಹಗರಣಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ
-
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ವೆಬ್‌ಸೈಟ್‌ನಲ್ಲಿ ಕಂಪನಿಯ ನೋಂದಣಿ ವಿವರಗಳನ್ನು ಪರಿಶೀಲಿಸಿ.
-
ಹಣವನ್ನು ಸಂಗ್ರಹಿಸಲಾಗುತ್ತಿರುವ ಸಾಮಾಜಿಕ ಉದ್ದೇಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ. ಇದು ಹಣ ಅಕ್ರಮ ವರ್ಗಾವಣೆಗೂ ಒಂದು ಕಾರಣವಾಗಿರಬಹುದು.
-
ಸಣ್ಣ-ಟಿಕೆಟ್ "ಇಕ್ವಿಟಿ" ಭರವಸೆಗಳ ಬಗ್ಗೆ ಎಚ್ಚರವಿರಲಿ - ನಿಜವಾದ ಇಕ್ವಿಟಿ ಹೂಡಿಕೆಯನ್ನು ಯಾವಾಗಲೂ ಪರವಾನಗಿ ಪಡೆದ ವೇದಿಕೆಗಳು ಅಥವಾ ಅಧಿಕೃತ ಬ್ರೋಕರ್‌ಗಳ ಮೂಲಕ ಮಾಡಲಾಗುತ್ತದೆ.
-
ಖಚಿತವಾದ ಆದಾಯವನ್ನು ನೀಡುವ ಕ್ಯಾಂಪೇನ್‌ಗಳನ್ನು ತಪ್ಪಿಸಿ - ಯಾವುದೇ ಕಾನೂನುಬದ್ಧ ಸ್ಟಾರ್ಟಪ್‌ಗಳು ಅದನ್ನು ಮಾಡುವುದಿಲ್ಲ.
-
ವೈಯಕ್ತಿಕ ಖಾತೆಗಳಿಗೆ ಹಣವನ್ನು ಟ್ರಾನ್ಸ್‌ಫರ್ ಮಾಡಬೇಡಿ ಅಥವಾ ಬಿಸಿನೆಸ್ ಪ್ರತಿನಿಧಿಸುವುದಾಗಿ ಕ್ಲೈಮ್ ಮಾಡುವ ವ್ಯಕ್ತಿಗಳ ಯುಪಿಐ ಐಡಿ ಗಳಿಗೆ ಹಣ ಕಳುಹಿಸಬೇಡಿ.
-
ಪಾರದರ್ಶಕತೆಗಾಗಿ ನೋಡಿ - ನಿಜವಾದ ಸ್ಟಾರ್ಟಪ್‌ಗಳು ಪರಿಶೀಲಿಸಬಹುದಾದ ಸಂಪರ್ಕ ವಿವರಗಳು, ಸಂಸ್ಥಾಪಕರ ಲಿಂಕ್ಡ್‌ಇನ್ ಪ್ರೊಫೈಲ್‌ಗಳು ಮತ್ತು ಆಡಿಟ್ ಮಾಡಲಾದ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುತ್ತವೆ.
-
ಅನುಮಾನಾಸ್ಪದ ವೇದಿಕೆಗಳನ್ನು ವರದಿ ಮಾಡಿ ಅಥವಾ ಸೆಬಿ ಅಥವಾ cybercrime.gov.in ಗೆ ಮನವಿ ಕಳುಹಿಸಿ.
ಅಂತಿಮ ಕಿವಿಮಾತು: ಸಹಾನುಭೂತಿ ಒಳ್ಳೆಯದೇ, ಆದರೆ ಪರಿಶೀಲಿಸಿ ಮುಂದುವರಿಯುವುದು ಜಾಣತನ.
ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುವುದು ಅದ್ಭುತ ಕೆಲಸ - ಆದರೆ ನಿಮ್ಮ ಸುರಕ್ಷತೆಯ ವೆಚ್ಚದಲ್ಲಲ್ಲ.
ವಂಚಕರು ಸದ್ಭಾವನೆ ಮತ್ತು ಸಾಮಾಜಿಕ ಪ್ರಗತಿಯ ಭಾಷೆಯಲ್ಲಿ ದುರಾಸೆ ಮತ್ತು ಮೋಸವನ್ನು ಮುಚ್ಚಿಡುತ್ತಿದ್ದಾರೆ.
ಆತ್ಮನಿರ್ಭರ್ ಇನ್ವೆಸ್ಟರ್ ಆಗಿ - ಅಪರಿಚಿತ ವೇದಿಕೆಯಲ್ಲಿ ಮುಂದಿನ "ದೊಡ್ಡ ಚಿಂತನೆ"ಯಲ್ಲಿ ಹೂಡಿಕೆ ಮಾಡುವ ಮೊದಲು ಕೊಂಚ ತಡೆಯಿರಿ, ಯೋಚಿಸಿ ಮತ್ತು ಪರಿಶೀಲಿಸಿ.
ಏಕೆಂದರೆ ನಿಜವಾದ ಸ್ಟಾರ್ಟಪ್ ನಂಬಿಕೆಯನ್ನು ಕಟ್ಟುತ್ತದೆ - ವಂಚನೆಯ ಜಾಲವನ್ನಲ್ಲ.


