ನಕಲಿ ಹೆಚ್ಚಿನ ಆದಾಯದ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳು

ಟ್ರೇಡಿಂಗ್ ದುರಂತವಾಗಿ ಬದಲಾಗಬಹುದು

ಅವಾಸ್ತವಿಕ ಲಾಭಗಳನ್ನು ತೋರಿಸುವ ನಕಲಿ ಹೆಚ್ಚಿನ-ಆದಾಯದ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಎಚ್ಚರದಿಂದಿರಿ

ಇದು ಸಂದೇಶ, ಜಾಹೀರಾತು, ಅಥವಾ ಸ್ನೇಹಿತರ "ಯಶಸ್ಸಿನ ಕಥೆ"ಯೊಂದಿಗೆ ಪ್ರಾರಂಭವಾಗುತ್ತದೆ

ಟ್ರೇಡಿಂಗ್ ದುರಂತವಾಗಿ ಬದಲಾಗಬಹುದು

ಅವಾಸ್ತವಿಕ ಲಾಭಗಳನ್ನು ತೋರಿಸುವ ನಕಲಿ ಹೆಚ್ಚಿನ-ಆದಾಯದ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಎಚ್ಚರದಿಂದಿರಿ

ಇದು ಸಂದೇಶ, ಜಾಹೀರಾತು, ಅಥವಾ ಸ್ನೇಹಿತರ "ಯಶಸ್ಸಿನ ಕಥೆ"ಯೊಂದಿಗೆ ಪ್ರಾರಂಭವಾಗುತ್ತದೆ

"ನಮ್ಮ ಎಐ-ಆಧಾರಿತ ಟ್ರೇಡಿಂಗ್ ಆ್ಯಪ್‌ ಮೂಲಕ ಪ್ರತಿ ವಾರ 10% ಲಾಭ ಗಳಿಸಿ!"
"ಯಾವುದೇ ಸಮಯದಲ್ಲಿ ವಿತ್‌ಡ್ರಾ ಮಾಡಿ - ಖಚಿತ ಆದಾಯ!"

ನೀವು ಸೈನ್ ಅಪ್ ಮಾಡುತ್ತೀರಿ. ಡ್ಯಾಶ್‌ಬೋರ್ಡ್ ಚೆನ್ನಾಗಿ ಕಾಣುತ್ತದೆ. ನೀವು ₹10,000 ಡೆಪಾಸಿಟ್ ಮಾಡುತ್ತೀರಿ, ಮತ್ತು ಕೆಲ ದಿನಗಳ ಒಳಗೆ ನಿಮ್ಮ ಖಾತೆ ₹12,000 ತೋರಿಸುತ್ತದೆ. ನೀವು ಸಣ್ಣ ವಿತ್‌ಡ್ರಾವಲ್ ಕೂಡಾ ಮಾಡುತ್ತೀರಿ — ನಿಮಗೆ ಹಣ ಸಿಗುತ್ತದೆ! ಉತ್ತೇಜಿತರಾಗಿ, ನೀವು ಹೆಚ್ಚು ಹೂಡಿಕೆ ಮಾಡುತ್ತೀರಿ.

ನಂತರ ಹಠಾತ್ತಾಗಿ, ಆ್ಯಪ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ನಿಮ್ಮ ಖಾತೆ ಲಾಕ್ ಆಗಿದೆ. ಗ್ರಾಹಕ ಸಹಾಯವಾಣಿ ಉತ್ತರ ನೀಡುವುದಿಲ್ಲ.

ಅಂದರೆ, ನೀವು ಮೋಸ ಹೋಗಿದ್ದೀರಿ.

ನಕಲಿ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಸ್ಕ್ಯಾಮ್ ಎಂದರೇನು?

ವಂಚಕರು ನಿಜವಾದ ಟ್ರೇಡಿಂಗ್ ವ್ಯವಸ್ಥೆಗಳನ್ನು ಹೋಲುವ ಆನ್‌ಲೈನ್ ಟ್ರೇಡಿಂಗ್ ವೇದಿಕೆಗಳು ಅಥವಾ ಮೊಬೈಲ್ ಆ್ಯಪ್‌ಗಳನ್ನು ಸೃಷ್ಟಿಸುತ್ತಾರೆ - ಅವು ಚಾರ್ಟ್‌ಗಳು, ಡ್ಯಾಶ್‌ಬೋರ್ಡ್‌ಗಳು ಮತ್ತು ಲೈವ್ ಮಾರುಕಟ್ಟೆ ಡೇಟಾದೊಂದಿಗೆ ನೈಜವಾಗಿ ಕಾಣುತ್ತವೆ.

ಅವರು ಈ ಕೆಳಗಿನ ಹೆಸರಿನಲ್ಲಿ ಅವಾಸ್ತವಿಕವಾದ ಹೆಚ್ಚಿನ ಆದಾಯದ ಭರವಸೆ ನೀಡುತ್ತಾರೆ,:

  • ಅಲ್ಗಾರಿದಮಿಕ್ ಅಥವಾ ಎಐ-ಆಧಾರಿತ ಟ್ರೇಡಿಂಗ್,

  • ಫಾರೆಕ್ಸ್ ಅಥವಾ ಕ್ರಿಪ್ಟೋ ಟ್ರೇಡಿಂಗ್,

  • ಕಮಾಡಿಟಿ ಅಥವಾ ಡಿರೈವೇಟಿವ್‌ಗಳ ಸ್ಕೀಮ್‌ಗಳು ಅಥವಾ

  • ಜಾಗತಿಕ ಹೂಡಿಕೆ ಅವಕಾಶಗಳು.

ಆರಂಭದಲ್ಲಿ, ಅವರು ನಿಮ್ಮ ವಿಶ್ವಾಸವನ್ನು ಗಳಿಸಲು ಸಣ್ಣ ಲಾಭಗಳನ್ನು ನೀಡುತ್ತಾರೆ ಮತ್ತು ತ್ವರಿತ ವಿತ್‌ಡ್ರಾವಲ್‌ಗಳನ್ನು ಅನುಮತಿಸುತ್ತಾರೆ. ಒಮ್ಮೆ ನೀವು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದ ನಂತರ, ಪ್ಲಾಟ್‌ಫಾರ್ಮ್ ನಿಮ್ಮ ಖಾತೆಯನ್ನು ಬ್ಲಾಕ್ ಮಾಡುತ್ತದೆ, ವಿತ್‌ಡ್ರಾವಲ್‌ಗಳನ್ನು ನಿಲ್ಲಿಸುತ್ತದೆ ಅಥವಾ ಸಂಪೂರ್ಣವಾಗಿ ಕಣ್ಮರೆಯಾಗಿ ಬಿಡುತ್ತದೆ.

ಈ ಹಗರಣಗಳು ಹೇಗೆ ಕೆಲಸ ಮಾಡುತ್ತವೆ

  1. ಆಮಿಷ: ಹೆಚ್ಚಿನ ಆದಾಯವನ್ನು ಭರವಸೆ ನೀಡುವ ಆಕರ್ಷಕ ಸೋಶಿಯಲ್ ಮೀಡಿಯಾ ಜಾಹೀರಾತುಗಳು ಅಥವಾ ವಾಟ್ಸಾಪ್ ಮೆಸೇಜ್‌ಗಳು.

  2. ವಿಶ್ವಾಸ-ನಿರ್ಮಾಣ: ಸಣ್ಣ ವಿತ್‌ಡ್ರಾವಲ್‌ಗಳು ಯಶಸ್ವಿಯಾಗುತ್ತವೆ; ನಕಲಿ ಲಾಭಗಳು ನಿಮ್ಮ ಖಾತೆಯಲ್ಲಿ ಕಾಣಿಸಿಕೊಳ್ಳುತ್ತವೆ.

  3. ಮನವೊಲಿಕೆ: "ಟಾಪ್ ಅಪ್" ಮಾಡಲು ಅಥವಾ "ಪ್ರೀಮಿಯಂ ಪ್ಲಾನ್‌ಗೆ ಅಪ್ಗ್ರೇಡ್ ಆಗಲು" ನಿಮ್ಮನ್ನು ಒಪ್ಪಿಸಲಾಗುತ್ತದೆ

  4. ಸತ್ಯದ ಅನಾವರಣ: ವಿತ್‌ಡ್ರಾವಲ್‌ಗಳು ವಿಫಲವಾಗುತ್ತವೆ, ನಿಮ್ಮ ಬ್ಯಾಲೆನ್ಸ್ ಕಾಣಿಸುವುದಿಲ್ಲ, ಹಾಗೆಯೇ ವಂಚಕರೂ ಕಣ್ಮರೆಯಾಗುತ್ತಾರೆ.

ಈ ಸ್ಕ್ಯಾಮ್‌ಗಳು ಸಾಮಾನ್ಯವಾಗಿ ನಕಲಿ ಗ್ರಾಹಕ ಸಹಾಯವಾಣಿ ನಂಬರ್‌ಗಳು, ಕ್ಲೋನ್ ಆದ ವೆಬ್‌ಸೈಟ್‌ಗಳು ಮತ್ತು ಕಾನೂನುಬದ್ಧವಾಗಿ ಕಾಣಿಸಿಕೊಳ್ಳಲು ನಕಲಿ ಟೆಸ್ಟಿಮೋನಿಯಲ್‌ಗಳನ್ನು ಬಳಸುತ್ತವೆ.

ರಿಯಲ್-ಲೈಫ್ ಕೇಸ್‌ಗಳು

  • ನಕಲಿ ಟ್ರೇಡಿಂಗ್ ವೇದಿಕೆಯೊಂದು ಭಾರತೀಯ ಹೂಡಿಕೆದಾರರಿಂದ ₹800 ಗೂ ಹೆಚ್ಚು ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ.https://timesofindia.indiatimes.com/india/illegal-trading-platform-made-rs-800cr-profit-in-india-in-just-9-months/articleshow/124300311.cms

  • "ಸೀಮಿತ ಅವಧಿಯ ಟ್ರೇಡಿಂಗ್ ಅಕ್ಸೆಸ್" ಅನ್ನು ನೀಡುವ ಯೂಟ್ಯೂಬ್ ಇನ್ಫ್ಲುಯೆನ್ಸರ್‌ಗಳು ಮತ್ತು ಟೆಲಿಗ್ರಾಮ್ ಗ್ರೂಪ್‌ಗಳ ಮೂಲಕ ಅನೇಕ ವಂಚನೆಗಳನ್ನು ಪ್ರಚಾರ ಮಾಡಲಾಗುತ್ತದೆ

  • ಒಮ್ಮೆ ಬಳಕೆದಾರರು ಹೆಚ್ಚು ಹೂಡಿಕೆ ಮಾಡಿದ ನಂತರ, ಹಣ ವಿತ್‌ಡ್ರಾ ಮಾಡಲು "ತೆರಿಗೆಗಳು ಅಥವಾ ಪರಿಶೀಲನಾ ಶುಲ್ಕಗಳನ್ನು ಪಾವತಿಸುವಂತೆ" ಹೇಳಲಾಗುತ್ತದೆ ಮತ್ತು ನಂತರ ಖಾತೆಗೆ ಸಂಪೂರ್ಣವಾಗಿ ಅಕ್ಸೆಸ್ ನಿರ್ಬಂಧಿಸಲಾಗುತ್ತದೆ.

ನಿಮ್ಮನ್ನು ರಕ್ಷಿಸುವುದು ಹೇಗೆ

  • ಖಚಿತ ಅಥವಾ ಸ್ಥಿರ ಆದಾಯದ ಬಗ್ಗೆ ಸಂಶಯ ಹೊಂದಿರಿ - ಮಾರುಕಟ್ಟೆಗಳು ಆ ರೀತಿಯಲ್ಲಿ ಕೆಲಸ ಮಾಡುವುದಿಲ್ಲ.

  • ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಅಥವಾ ಮಧ್ಯವರ್ತಿಯನ್ನು ಪರಿಶೀಲಿಸಿಸೆಬಿಯ ಅಧಿಕೃತ ಪಟ್ಟಿಯಲ್ಲಿ:
    ಸೆಬಿ | ಮಾನ್ಯತೆ ಪಡೆದ ಮಧ್ಯವರ್ತಿಗಳು

  • ಭಾರತದಲ್ಲಿ ನೋಂದಣಿಯಾಗದ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ತಪ್ಪಿಸಿ ಅಥವಾ ವೈಯಕ್ತಿಕ ಅಕೌಂಟ್‌ಗಳು ಅಥವಾ ಕ್ರಿಪ್ಟೋ ವಾಲೆಟ್‌ಗಳ ಮೂಲಕ ಪಾವತಿಗಳನ್ನು ಕೇಳಿ.

  • ಒಟಿಪಿಗಳು, ಲಾಗಿನ್ ಕ್ರೆಡೆನ್ಶಿಯಲ್‌ಗಳು ಅಥವಾ ರಿಮೋಟ್ ಅಕ್ಸೆಸ್ ಅನ್ನು (ಡೆಸ್ಕ್‌ಟಾಪ್ ಹಂಚಿಕೆ ಆ್ಯಪ್‌ಗಳ ಮೂಲಕ) ಎಂದಿಗೂ "ಟ್ರೇಡ್ ಮಾಡಲು ಸಹಾಯ ಮಾಡುತ್ತೇವೆ" ಎಂದು ಹೇಳುವ ಯಾರೊಂದಿಗೂ ಹಂಚಿಕೊಳ್ಳಬೇಡಿ

  • ಯಾವುದೇ ಟ್ರೇಡಿಂಗ್ ಆ್ಯಪನ್ನು ಡೌನ್ಲೋಡ್ ಮಾಡುವ ಮೊದಲು ರಿವ್ಯೂಗಳು ಮತ್ತು ಆ್ಯಪ್ ಅನುಮತಿಗಳನ್ನು ಪರಿಶೀಲಿಸಿ.

  • ವಾಟ್ಸಾಪ್, ಟೆಲಿಗ್ರಾಮ್ ಅಥವಾ ಇನ್‌ಸ್ಟಾಗ್ರಾಮ್‌ನಲ್ಲಿನ ಬೇಡದ ಹೂಡಿಕೆ ಗುಂಪುಗಳ ಬಗ್ಗೆ ಎಚ್ಚರದಿಂದಿರಿ.

  • cybercrime.gov.in ಗೆ ಅಂತಹ ವಂಚನೆಗಳನ್ನು ವರದಿ ಮಾಡಿ ಮತ್ತು ನೀವು ಹಣವನ್ನು ಟ್ರಾನ್ಸ್‌ಫರ್ ಮಾಡಿದ್ದರೆ ತಕ್ಷಣ ನಿಮ್ಮ ಬ್ಯಾಂಕ್‌ಗೆ ಸೂಚನೆ ನೀಡಿ.

ಕೊನೆಯ ಮಾತು: ಸುಲಭವಾಗಿ ಲಾಭ ಸಿಗುವುದಿಲ್ಲ-ಆದರೆ ಸುಲಭವಾಗಿ ಮೋಸ ಮಾಡುತ್ತಾರೆ

ವಂಚಕರಿಗೆ ಒಂದು ವಿಷಯ ತಿಳಿದಿದೆ: ದುರಾಸೆ ಮತ್ತು ಅವಸರವು ಸರಿಯಾಗಿ ಯೋಚಿಸುವ ಸಾಮರ್ಥ್ಯವನ್ನು ಮರೆಸುತ್ತದೆ.
ಯಾವುದೇ ಕಾನೂನುಬದ್ಧ ಟ್ರೇಡಿಂಗ್ ವೇದಿಕೆಯು ಸ್ಥಿರ ಲಾಭಗಳು ಅಥವಾ ತ್ವರಿತ ವಿತ್‌ಡ್ರಾವಲ್‌ಗಳನ್ನು ಖಾತರಿಪಡಿಸುವುದಿಲ್ಲ.

ಆದ್ದರಿಂದ ನೀವು ಯಾವುದೇ "ನಂಬಲು ಅಸಾಧ್ಯವಾದಷ್ಟು" ಉತ್ತಮ ಆ್ಯಪ್ ಅಥವಾ ವೇದಿಕೆಯ ಮೂಲಕ ಹೂಡಿಕೆ ಮಾಡುವ ಮೊದಲು, ನೆನಪಿಡಿ:
ತಡೆ ಹಾಕಿಕೊಳ್ಳಿ. ಯೋಚಿಸಿ. ವೆರಿಫೈ ಮಾಡಿ.

ಆತ್ಮನಿರ್ಭರ್ ಇನ್ವೆಸ್ಟರ್ ಆಗಿ, ಏಕೆಂದರೆ ಹೂಡಿಕೆಯಲ್ಲಿ, ತಾಳ್ಮೆ ಸಂಪತ್ತನ್ನು ನಿರ್ಮಿಸುತ್ತದೆ - ಶಾರ್ಟ್‌ಕಟ್‌ನಿಂದ ನಷ್ಟ ಉಂಟಾಗುತ್ತದೆ.