- ಪ್ರಮುಖ ಕಂಟೆಂಟ್ಗೆ ಹೋಗಿ
- ಸ್ಕ್ರೀನ್ ರೀಡರ್ ಅಕ್ಸೆಸ್
- ಬೀಟಾ ಆವೃತ್ತಿ
ನಿಮ್ಮ ಸಂಪತ್ತಿನ ನಿಶ್ಶಬ್ದ ಕಳ್ಳ- ಹಣದುಬ್ಬರವನ್ನು ಅರ್ಥ ಮಾಡಿಕೊಳ್ಳೋಣ
ನಿಮ್ಮ ಹಣವು ಕಾಲಾನಂತರದಲ್ಲಿ ಯಾಕೆ ಮೌಲ್ಯವನ್ನು ಕಳೆದುಕೊಳ್ಳುತ್ತದೆ?
ನೀವು ಬಹುಶಃ ನಿಮ್ಮ ಪೋಷಕರು ಹೀಗೆ ಹೇಳುವುದನ್ನು ಕೇಳಿದ್ದೀರಿ,
"ನಮ್ಮ ಕಾಲದಲ್ಲಿ, ₹20 ಕ್ಕೆ ಒಂದು ಲೀಟರ್ ಪೆಟ್ರೋಲ್ ಸಿಗುತ್ತಿತ್ತು!"
ನಿಮ್ಮ ಹಣವು ಕಾಲಾನಂತರದಲ್ಲಿ ಯಾಕೆ ಮೌಲ್ಯವನ್ನು ಕಳೆದುಕೊಳ್ಳುತ್ತದೆ?
ನೀವು ಬಹುಶಃ ನಿಮ್ಮ ಪೋಷಕರು ಹೀಗೆ ಹೇಳುವುದನ್ನು ಕೇಳಿದ್ದೀರಿ,
"ನಮ್ಮ ಕಾಲದಲ್ಲಿ, ₹20 ಕ್ಕೆ ಒಂದು ಲೀಟರ್ ಪೆಟ್ರೋಲ್ ಸಿಗುತ್ತಿತ್ತು!"
ಅಥವಾ ನೀವು ಅದೇ ವಸ್ತುಗಳನ್ನು ಖರೀದಿಸುತ್ತಿದ್ದರೂ ಸಹ — ನಿಮ್ಮ ಮಾಸಿಕ ದಿನಸಿ ಬಿಲ್ ನಿಧಾನವಾಗಿ ಹೆಚ್ಚುತ್ತಿರುವುದನ್ನು ಬಹುಶಃ ನೀವು ಗಮನಿಸಿರಬಹುದು.
ಅದು ಹಣದುಬ್ಬರದ ಕೆಲಸ - ನಿಶ್ಶಬ್ದ, ಸ್ಥಿರ ಮತ್ತು ತಪ್ಪಿಸಲಾಗದ ಹೊಡೆತ.
ಇದು ರಾತ್ರೋರಾತ್ರಿ ನಿಮ್ಮ ಹಣವನ್ನು ಕದಿಯುವುದಿಲ್ಲ. ಅದಕ್ಕಿಂತ ಕೆಟ್ಟ ಪರಿಣಾಮ ಬೀರುತ್ತದೆ - ಇದು ಕಾಲಾನಂತರದಲ್ಲಿ ನಿಮ್ಮ ಹಣದ ಖರೀದಿ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಹಣದುಬ್ಬರ ಎಂದರೇನು?
ಸರಳವಾಗಿ ಹೇಳುವುದಾದರೆ ಹಣದುಬ್ಬರ ಎಂದರೆ, ಕಾಲಾನಂತರದಲ್ಲಿಸರಕು ಮತ್ತು ಸೇವೆಗಳ ಬೆಲೆಗಳಲ್ಲಿ ಏರಿಕೆಕಾಣುವುದು ಎಂದರ್ಥ.
ಬೆಲೆಗಳು ಹೆಚ್ಚಾದಂತೆ,ನಿಮ್ಮ ಹಣದ ಖರೀದಿ ಶಕ್ತಿ ಕಡಿಮೆಯಾಗುತ್ತದೆ.
ಸರಳವಾಗಿ ಹೇಳುವುದಾದರೆ - ಇಂದು ₹1,000 ದಿಂದ ನೀವು ಖರೀದಿಸುವಷ್ಟನ್ನು, ಮುಂದಿನ ವರ್ಷ ಖರೀದಿಸಲು ಸಾಧ್ಯವಿಲ್ಲ.
ಉದಾಹರಣೆಗೆ:
ಒಂದುವೇಳೆ ಹಣದುಬ್ಬರ 6% ಆಗಿದ್ದರೆ, ಈ ವರ್ಷ ₹1,000 ಬೆಲೆಯುಳ್ಳ ವಸ್ತುವಿನ ಬೆಲೆ ಮುಂದಿನ ವರ್ಷ ₹1,060 ಆಗುತ್ತದೆ.
ನಿಮ್ಮ ಹಣವು ಹಣದುಬ್ಬರಕ್ಕೆ ಸಮನಾದ ವೇಗದಲ್ಲಾದರೂ ಬೆಳೆಯದಿದ್ದರೆ, ನೀವು ನಿಜವಾಗಿಯೂಸಂಪತ್ತನ್ನು ಕಳೆದುಕೊಳ್ಳುತ್ತಿದ್ದೀರಿ, ನಿಮ್ಮ ಬ್ಯಾಲೆನ್ಸ್ ಇದ್ದಷ್ಟೇ ಇದ್ದರೂ, ಸಂಪತ್ತು ಕಡಿಮೆಯಾಗುತ್ತಿದೆ ಎಂದರ್ಥ.
ನಿಜ-ಜೀವನದ ಉದಾಹರಣೆ
| ವಸ್ತು | 2010 ರಲ್ಲಿ ಬೆಲೆ | 2024 ರಲ್ಲಿ ಬೆಲೆ | ಹೆಚ್ಚಳ |
|---|---|---|---|
| 1 ಲೀಟರ್ ಪೆಟ್ರೋಲ್ | ₹55 | ₹105 | +90% |
| ಸಿನಿಮಾ ಟಿಕೆಟ್ | ₹120 | ₹350 | +190% |
| ಫ್ಯಾಮಿಲಿ ಡಿನ್ನರ್ | ₹600 | ₹1,600 | +166% |
| 1-ವರ್ಷದ ಕಾಲೇಜ್ ಶುಲ್ಕ | ₹50,000 | ₹1,50,000 | +200% |
ಹಣದುಬ್ಬರ - ನಿಧಾನವಾದರೂ ಪ್ರಭಾವಶಾಲಿ.
ನಿಷ್ಕ್ರಿಯ ಹಣಕ್ಕೆ ಹಣದುಬ್ಬರ ಏಕೆ ಅಪಾಯಕಾರಿ?
-
ನಿಮ್ಮ ಉಳಿತಾಯವು ಖರೀದಿ ಶಕ್ತಿಯನ್ನು ಕಳೆದುಕೊಳ್ಳುತ್ತದೆ:
ಹಣದುಬ್ಬರ 6% ಆಗಿದ್ದರೆ, ಉಳಿತಾಯ ಖಾತೆಯಲ್ಲಿ 3% ಬಡ್ಡಿ ಪಡೆಯುವ ₹1 ಲಕ್ಷ ಹಣದ ಮೌಲ್ಯ ವಾಸ್ತವದಲ್ಲಿ ಕುಗ್ಗುತ್ತಿದೆ ಎಂದರ್ಥ. -
ದೀರ್ಘಾವಧಿಯ ಗುರಿಗಳು ದುಬಾರಿಯಾಗುತ್ತವೆ:
ಇಂದು ನಿಮ್ಮ ಮಗುವಿನ ಶಿಕ್ಷಣಕ್ಕಾಗಿ ನೀವು ಯೋಜಿಸಿದ ₹10 ಲಕ್ಷಕ್ಕೆ, 15 ವರ್ಷಗಳಲ್ಲಿ ₹20-25 ಲಕ್ಷ ಬೇಕಾಗಬಹುದು. -
ನಗದು ಮತ್ತು ಕಡಿಮೆ-ಲಾಭ ನೀಡುವ ಡೆಪಾಸಿಟ್‌ಗಳು ಹಣದುಬ್ಬರವನ್ನು ಸಮರ್ಥವಾಗಿ ಎದುರಿಸುವುದಿಲ್ಲ:
ದೊಡ್ಡ ಮೊತ್ತವನ್ನು ನಿಷ್ಕ್ರಿಯವಾಗಿ ಅಥವಾ ಕಡಿಮೆ ಬಡ್ಡಿ ನೀಡುವ ಖಾತೆಗಳಲ್ಲಿ ಇರಿಸುವುದು, ನಿಮ್ಮನ್ನು ರಕ್ಷಿಸುವುದಿಲ್ಲ - ಇದು ನಿಶ್ಶಬ್ದವಾಗಿ ಮೌಲ್ಯವನ್ನು ಕಡಿಮೆ ಮಾಡುತ್ತದೆ. -
ಇದು ಸುರಕ್ಷತೆಯ ಸುಳ್ಳು ಭರವಸೆಯನ್ನು ನೀಡುತ್ತದೆ:
ನೀವು ಸಂಪತ್ತನ್ನು ರಕ್ಷಿಸುತ್ತಿದ್ದೀರಿ ಎಂದು ನೀವು ಭಾವಿಸುತ್ತೀರಿ, ಆದರೆ ನೀವು ಅದರ ಕುಸಿತವನ್ನು ನಿಧಾನಗೊಳಿಸುತ್ತಿದ್ದೀರಿ ಅಷ್ಟೇ.
ಹಣದುಬ್ಬರವು ಏಕರೂಪವಾಗಿಲ್ಲ - ಮತ್ತು ಅದುವೇ ದೊಡ್ಡ ಸಮಸ್ಯೆ
ಹಣದುಬ್ಬರವು ಎಲ್ಲಾ ವರ್ಗಗಳಲ್ಲಿ ಸಮಾನವಾಗಿ ಏರಿಕೆ ಆಗುವುದಿಲ್ಲ. ಆಹಾರದಂತಹ ಕೆಲವು ವಸ್ತುಗಳು ಮಧ್ಯಮವಾಗಿ ಹೆಚ್ಚಾಗಬಹುದು, ಇತರ ವಸ್ತುಗಳು — ವಿಶೇಷವಾಗಿ, ವೈದ್ಯಕೀಯ ಮತ್ತು ಶಿಕ್ಷಣ ವೆಚ್ಚಗಳು — ಹೆಚ್ಚು ವೇಗವಾಗಿ ಏರಿಕೆಯಾಗುತ್ತವೆ. ಭಾರತದಲ್ಲಿ ವೈದ್ಯಕೀಯ ಹಣದುಬ್ಬರವು ಸ್ಥಿರವಾಗಿ 10-14% ರಷ್ಟಿದ್ದು, ಸಾಮಾನ್ಯ ಹಣದುಬ್ಬರಕ್ಕಿಂತ ಬಹಳ ಹೆಚ್ಚಾಗಿದೆ. (ಜಿಐ ಕೌನ್ಸಿಲ್) (https://www.gicouncil.in/news-media/gic-in-the-news/bridging-the-gap-unlocking-the-potential-of-health-insurance-in-india)
ಶಿಕ್ಷಣದ ವೆಚ್ಚಗಳು ಸಾಮಾನ್ಯವಾಗಿ ಪ್ರತಿ 6-8 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತಿದ್ದು, ಅವುಗಳನ್ನು ವೇಗವಾಗಿ ಬೆಳೆಯುತ್ತಿರುವ ಕೌಟುಂಬಿಕ ವೆಚ್ಚಗಳಲ್ಲಿ ಒಂದಾಗಿಸಿದೆ. (ಬಿಸಿನೆಸ್ ಸ್ಟ್ಯಾಂಡರ್ಡ್) (https://www.business-standard.com/finance/personal-finance/education-costs-double-every-6-yrs-how-to-beat-inflation-and-invest-for-your-child-123072600265_1.html). ಈ ಅಸಮಾನ ಏರಿಕೆಯು, ದೈನಂದಿನ ಜೀವನ ವೆಚ್ಚಗಳು ಮತ್ತು ದೀರ್ಘಾವಧಿಯ ಗುರಿಗಳು ಅನಿರೀಕ್ಷಿತವಾಗಿ ಹೆಚ್ಚುತ್ತಿರುವುದನ್ನು - ಮತ್ತು ಸಾಮಾನ್ಯವಾಗಿ ನಿರೀಕ್ಷೆಗಿಂತ ವೇಗವಾಗಿ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.
ನಿವೃತ್ತಿಯಂತಹ ದೀರ್ಘಾವಧಿಯ ಗುರಿಗಳಿಗೆ ಯೋಜಿಸುವಾಗ ಇದು ವಿಶೇಷವಾಗಿ ನಿರ್ಣಾಯಕವಾಗಿದೆ. 20-30 ವರ್ಷಗಳ ದೂರದಲ್ಲಿರುವ ಗುರಿಗಳು ನಿರಂತರ ಹಣದುಬ್ಬರದಿಂದಾಗಿ ಹೆಚ್ಚು ದುಬಾರಿಯಾಗಿ ಕಾಣಬಹುದು. ನಿಮ್ಮ ನಿವೃತ್ತಿ ನಿಧಿಯನ್ನು ಇಂದಿನ ವೆಚ್ಚಗಳ ಆಧಾರದ ಮೇಲೆ ಮಾತ್ರ ಲೆಕ್ಕ ಹಾಕಲಾಗುವುದಿಲ್ಲ - ಇದು ಭವಿಷ್ಯದಲ್ಲಿ ಹೆಚ್ಚಿನ ವೆಚ್ಚಗಳನ್ನು ಒಳಗೊಳ್ಳಬೇಕಾಗಬಹುದು, ವಿಶೇಷವಾಗಿ ಆರೋಗ್ಯ ರಕ್ಷಣೆಯ ವೆಚ್ಚಗಳು ವಯಸ್ಸಾದಂತೆ ಗಮನಾರ್ಹವಾಗಿ ಹೆಚ್ಚಾಗುತ್ತದೆ.
ಹಣದುಬ್ಬರವನ್ನು ತಡೆಯುವುದು ಹೇಗೆ?
-
ಹೂಡಿಕೆ ಮಾಡಿ, ಕೇವಲ ಉಳಿತಾಯ ಮಾಡಬೇಡಿ.
ಹಣದುಬ್ಬರಕ್ಕಿಂತ ಹೆಚ್ಚಿನ ಆದಾಯವನ್ನು ನೀಡುವ ಸಾಧನಗಳಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿ. -
ನಿಮ್ಮ ಗುರಿಗಳನ್ನು ಸೂಕ್ತ ಹೂಡಿಕೆಗಳೊಂದಿಗೆ ಹೊಂದಿಸಿ.
ಅಲ್ಪಾವಧಿಯ ಅಗತ್ಯಗಳಿಗಾಗಿ, ಕಡಿಮೆ-ಅಪಾಯದ ಮಾರ್ಗಗಳನ್ನು ಆಯ್ಕೆ ಮಾಡಿ. ದೀರ್ಘಾವಧಿಯ ಗುರಿಗಳಿಗಾಗಿ, ಕಾಲಾನಂತರದಲ್ಲಿ ಹಣದುಬ್ಬರವನ್ನು ಮೀರಿಸುವ ಆಸ್ತಿ ವರ್ಗವನ್ನು ಪರಿಗಣಿಸಿ. -
ನಿಮ್ಮ ಪೋರ್ಟ್‌ಫೋಲಿಯೋವನ್ನು ವೈವಿಧ್ಯಗೊಳಿಸಿ.
ಅಸೆಟ್ ವರ್ಗಗಳ ಮಿಶ್ರಣ - ಇಕ್ವಿಟಿ, ಡೆಟ್, ಚಿನ್ನ ಮತ್ತು ರಿಯಲ್ ಎಸ್ಟೇಟ್ - ಬೆಳವಣಿಗೆ ಮತ್ತು ಸ್ಥಿರತೆಯನ್ನು ಸಮತೋಲನಗೊಳಿಸುತ್ತದೆ. -
ಮುಂಚಿತವಾಗಿ ಆರಂಭಿಸಿ ಮತ್ತು ಸ್ಥಿರವಾಗಿರಿ.
ನಿಮ್ಮ ಹಣಕ್ಕೆ ಬೆಳೆಯಲು ಮತ್ತು ಹಣದುಬ್ಬರವನ್ನು ಸಹಜವಾಗಿ ಎದುರಿಸಲು ಸಾಕಷ್ಟು ಸಮಯವಿದ್ದಾಗ, ಕಾಂಪೌಂಡಿಂಗ್ ಉತ್ತಮವಾಗಿ ಕೆಲಸ ಮಾಡುತ್ತದೆ. -
ನಿಮ್ಮ ಪೋರ್ಟ್‌ಫೋಲಿಯೋವನ್ನು ನಿಯತಕಾಲಿಕವಾಗಿ ಪರಿಶೀಲಿಸಿ.
ನಿಮ್ಮ ಹೂಡಿಕೆಗಳ ಬೆಳವಣಿಗೆಯು ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕವಾಗಿ ಆದಾಯ ವರ್ಸಸ್ ಹಣದುಬ್ಬರದ ಮರುಮೌಲ್ಯಮಾಪನ ಮಾಡಿ.
ತ್ವರಿತ ಒಳನೋಟ
ಹಣದುಬ್ಬರವು ವರ್ಷಕ್ಕೆ ಸರಾಸರಿ 6% ಆಗಿದ್ದರೆ -
-
ನಿಮ್ಮ ಹಣದ ಖರೀದಿ ಶಕ್ತಿ ಪ್ರತಿ 12 ವರ್ಷಗಳಿಗೊಮ್ಮೆ ಅರ್ಧದಷ್ಟು ಕಡಿಮೆಯಾಗುತ್ತದೆ.
-
ಅಂದರೆ, ಇಂದಿನ ₹ 10 ಲಕ್ಷದಿಂದ 12 ವರ್ಷಗಳ ನಂತರ ₹5 ಲಕ್ಷ ಮೌಲ್ಯದಷ್ಟು ಮಾತ್ರ ಖರೀದಿ ಮಾಡಲು ಸಾಧ್ಯ.
ಹಣದುಬ್ಬರವು ಕೇವಲ ವಸ್ತುಗಳನ್ನು ದುಬಾರಿಯಾಗಿಸುವುದಿಲ್ಲ - ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿರುವುದನ್ನು ದುಬಾರಿ ಆಗಿಸುತ್ತದೆ.
ಕೊನೆಯ ಮಾತು: ನೀವು ಹಣದುಬ್ಬರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ - ಆದರೆ ನೀವು ಅದನ್ನು ಮೀರಿ ಬೆಳೆಯಬಹುದು
ಹಣದುಬ್ಬರವು ಗುರುತ್ವಾಕರ್ಷಣೆಯಂತೆ ಕೆಲಸ ಮಾಡುತ್ತದೆ - ನೀವು ಗಮನಿಸಿದರೂ, ಇಲ್ಲದಿದ್ದರೂ ಅದು ನಿಮ್ಮ ಹಣದ ಮೌಲ್ಯವನ್ನು ಕೆಳಕ್ಕೆ ಬೀಳಿಸುತ್ತದೆ. ಆದರೆ ಜಾಣತನದ, ಗುರಿ-ಆಧಾರಿತ ಹೂಡಿಕೆಯೊಂದಿಗೆ, ನೀವು ಹಣದುಬ್ಬರವನ್ನು ಮೀರಿ ಬೆಳೆಯಬಹುದು.
ಆತ್ಮನಿರ್ಭರ್ ಇನ್ವೆಸ್ಟರ್ ಆಗಿ. ಉಳಿತಾಯಕ್ಕೆ ನಿಲ್ಲಿಸಬೇಡಿ - "ನನ್ನ ಹಣವು ಹಣದುಬ್ಬರದ ವಿರುದ್ಧ ತನ್ನ ಮೌಲ್ಯವನ್ನು ಕಾಯ್ದುಕೊಂಡಿದೆಯೇ?" ಎಂದು ಪ್ರಶ್ನಿಸಿಕೊಳ್ಳಿ


