ನಿಮ್ಮ ಅತ್ಯಂತ ಶಕ್ತಿಶಾಲಿ ಸಂಪತ್ತಿನ ಸಾಧನ ಹಣವಲ್ಲ - ಅದು ಸಮಯ

ಹೂಡಿಕೆ ಯೋಜನೆಯಲ್ಲಿ ಸಮಯದ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು

ಹೆಚ್ಚಿನ ಜನರು ಕೇಳುತ್ತಾರೆ,"ನಾನು ಎಲ್ಲಿ ಹೂಡಿಕೆ ಮಾಡಬೇಕು?"
ಆದರೆ ಜಾಣ ಪ್ರಶ್ನೆಯೇನೆಂದರೆ, -
"ನಾನು ಎಷ್ಟು ಸಮಯದವರೆಗೆ ಹೂಡಿಕೆ ಮಾಡುತ್ತಿದ್ದೇನೆ?"

ನಿಮ್ಮ ಅತ್ಯಂತ ಶಕ್ತಿಶಾಲಿ ಸಂಪತ್ತಿನ ಸಾಧನ ಹಣವಲ್ಲ - ಅದು ಸಮಯ

ಹೂಡಿಕೆ ಯೋಜನೆಯಲ್ಲಿ ಸಮಯದ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು

ಹೆಚ್ಚಿನ ಜನರು ಕೇಳುತ್ತಾರೆ,"ನಾನು ಎಲ್ಲಿ ಹೂಡಿಕೆ ಮಾಡಬೇಕು?"
ಆದರೆ ಜಾಣ ಪ್ರಶ್ನೆಯೇನೆಂದರೆ, -
"ನಾನು ಎಷ್ಟು ಸಮಯದವರೆಗೆ ಹೂಡಿಕೆ ಮಾಡುತ್ತಿದ್ದೇನೆ?"

ನಿಮ್ಮ ಹೂಡಿಕೆಯ ಅವಧಿ - ಅಂದರೆ, ನಿಮಗೆ ಹಣದ ಅಗತ್ಯ ಬೀಳುವ ಮೊದಲು ನೀವು ಹೊಂದಿರುವ ಸಮಯ - ಕೆಳಗಿನವುಗಳನ್ನು ನಿರ್ಧರಿಸುವ ಏಕೈಕ ಪ್ರಮುಖ ಅಂಶವಾಗಿದೆ:

  • ನೀವು ಎಷ್ಟು ಅಪಾಯ ತೆಗೆದುಕೊಳ್ಳಬಹುದು,
  • ನೀವು ಯಾವ ಪ್ರಾಡಕ್ಟ್‌ಗಳನ್ನು ಆಯ್ಕೆ ಮಾಡಬೇಕು,
  • ಮತ್ತು ನಿಮ್ಮ ಸಂಪತ್ತು ಕಾಲಕ್ರಮೇಣ ಹೇಗೆ ಬೆಳೆಯುತ್ತದೆ.

ನಿಮ್ಮ ಬಳಿ ಎಷ್ಟು ಸಮಯವಿದೆ ಎಂದು ಪರಿಗಣಿಸದೆ ಹೂಡಿಕೆ ಮಾಡುವುದು, ತಲುಪುವ ಸ್ಥಳವನ್ನು ತಿಳಿದುಕೊಳ್ಳದೆ ಪ್ರಯಾಣವನ್ನು ಯೋಜಿಸುವುದಕ್ಕೆ ಸಮನಾಗಿದೆ.

ಸಮಯದ ಮಿತಿ ಎಂದರೇನು?

ನಿಮ್ಮ ಹೂಡಿಕೆ ಸಮಯದ ಮಿತಿ ಎಂದರೆ, ನಿಮಗೆ ಹಣದ ಅಗತ್ಯ ಬೀಳುವ ಮೊದಲು ನೀವು ಹೂಡಿಕೆ ಮಾಡಬಹುದಾದ ಸಮಯವಾಗಿದೆ.

ವಿವಿಧ ಗುರಿಗಳು ವಿವಿಧ ಸಮಯದ ಮಿತಿಗಳನ್ನು ಹೊಂದಿವೆ:

  • ಅಲ್ಪ-ಅವಧಿ (0 - 3 ವರ್ಷಗಳು): ರಜಾದಿನಗಳು, ತುರ್ತು ಫಂಡ್ ಅಥವಾ ಸಣ್ಣ ಖರೀದಿಗಳು
  • ಮಧ್ಯಮ-ಅವಧಿ (3 - 7 ವರ್ಷಗಳು): ಕಾರ್ ಖರೀದಿ, ಮನೆ ಖರೀದಿಗೆ ಡೌನ್-ಪೇಮೆಂಟ್
  • ದೀರ್ಘ- ಅವಧಿ (7+ ವರ್ಷಗಳು): ನಿವೃತ್ತಿ, ಮಗುವಿನ ಶಿಕ್ಷಣ, ಸಂಪತ್ತು ಸೃಷ್ಟಿ

ಪ್ರತಿ ಸಮಯದ ಮಿತಿಯು ವಿಭಿನ್ನ ಹೂಡಿಕೆ ಕಾರ್ಯತಂತ್ರವನ್ನು ಹೊಂದಿದೆ.

ಹೂಡಿಕೆಯ ಸಮಯವು ಏಕೆ ಹೆಚ್ಚು ಮುಖ್ಯವಾಗಿದೆ

  1. ನೀವು ಎಷ್ಟು ಅಪಾಯವನ್ನು ತೆಗೆದುಕೊಳ್ಳಬಹುದು ಎಂಬುದನ್ನು ಇದು ನಿರ್ಧರಿಸುತ್ತದೆ
    • ಕಡಿಮೆ ಸಮಯ = ಕಡಿಮೆ ಅಪಾಯ
      ಸೀಮಿತ ಸಮಯವು ಹೆಚ್ಚು ಸ್ಥಿರತೆಯನ್ನು ಬಯಸುತ್ತದೆ.
    • ದೀರ್ಘ ಸಮಯ = ಹೆಚ್ಚಿನ ಅಪಾಯಕ್ಕೆ ಅನುಮತಿ ಇದೆ.
      ಅಲ್ಪಾವಧಿಯ ಏರಿಳಿತಗಳು ಕಡಿಮೆ ಇರುವುದರಿಂದ, ದೀರ್ಘ ಅವಧಿಯ ಹೂಡಿಕೆಗಳು ಬೆಳವಣಿಗೆ-ಆಧಾರಿತ ಆಯ್ಕೆಗಳಿಗೆ ಅವಕಾಶವನ್ನು ಒದಗಿಸುತ್ತವೆ.
  2. ಇದು ನಿಮ್ಮ ಅಸೆಟ್ ಹಂಚಿಕೆಯನ್ನು ರೂಪಿಸುತ್ತದೆ

    ನಿಮಗಿರುವ ಸಮಯವು ನಿಮ್ಮ ಪೋರ್ಟ್‌ಫೋಲಿಯೋದಲ್ಲಿ ಸ್ಥಿರತೆ ಮತ್ತು ಬೆಳವಣಿಗೆಯ ಸಮತೋಲನವನ್ನು ಪ್ರಭಾವಿಸುತ್ತದೆ.
    ಗುರಿಯು ದೂರದಲ್ಲಿದ್ದಾಗ, ತಕ್ಷಣದ ಸ್ಥಿರತೆಗಿಂತ ಹೆಚ್ಚಿನ ದೀರ್ಘಕಾಲೀನ ಸಾಮರ್ಥ್ಯವನ್ನು ಹೊಂದಿರುವ ಹೂಡಿಕೆಗಳನ್ನು ಆಯ್ಕೆ ಮಾಡಲು ನಿಮಗೆ ಹೆಚ್ಚಿನ ಅವಕಾಶ ಇರುತ್ತದೆ.

  3. ಇದು ಕಾಂಪೌಂಡಿಂಗ್‌ಗೆ ತನ್ನ ಮ್ಯಾಜಿಕ್ ಮಾಡಲು ಅವಕಾಶ ನೀಡುತ್ತದೆ

    ಕಾಂಪೌಂಡಿಂಗ್‌ಗೆ ಸಮಯ ಬೇಕಾಗುತ್ತದೆ — ಸೂಕ್ತ ಸಮಯವಲ್ಲ.
    ದೀರ್ಘಕಾಲ ತಾಳ್ಮೆಯಿಂದ ಹೂಡಿಕೆ ಮಾಡಿದರೆ, ಲಾಭ ಸಿಗುತ್ತದೆ. ಅನೇಕ ವರ್ಷಗಳಿಂದ ನಿರ್ವಹಿಸಿಕೊಂಡು ಬಂದಿದ್ದ ಸಣ್ಣ, ನಿಯಮಿತ ಹೂಡಿಕೆಯು ಅಲ್ಪಾವಧಿಗೆ ಹೂಡಿಕೆ ಮಾಡಿದ್ದ ದೊಡ್ಡ ಮೊತ್ತಕ್ಕಿಂತ ಉತ್ತಮ ಲಾಭವನ್ನು ನೀಡಬಲ್ಲದು.

  4. ಇದು ಮಾರುಕಟ್ಟೆ ಅಸ್ಥಿರತೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ

    ಮಾರುಕಟ್ಟೆಗಳು ಅಲ್ಪಾವಧಿಯಲ್ಲಿ ಮೇಲೆ ಕೆಳಗೆ ಚಲಿಸುತ್ತವೆ, ಆದರೆ ದೀರ್ಘಾವಧಿಯ ಟ್ರೆಂಡ್‌ಗಳು ಸಾಮಾನ್ಯವಾಗಿ ಹೆಚ್ಚು ಸ್ಥಿರವಾದ ಏರಿಕೆಯ ಪಥವನ್ನು ತೋರಿಸುತ್ತವೆ ಹಾಗೂ ದೀರ್ಘಾವಧಿಯ ಹೂಡಿಕೆದಾರರಿಗೆ ಹೂಡಿಕೆಯಲ್ಲಿ ಉಳಿಯಲು ಸಹಾಯ ಮಾಡುತ್ತವೆ.

  5. ಇದು ಉತ್ತಮವಾಗಿ ಯೋಜಿಸಲು ಮತ್ತು ಭಯವನ್ನು ಹೋಗಲಾಡಿಸಲು ನಿಮಗೆ ಸಹಾಯ ಮಾಡುತ್ತದೆ

    ನಿಮ್ಮ ಗುರಿ 10-15 ವರ್ಷಗಳ ದೂರದಲ್ಲಿದೆ ಎಂದು ನಿಮಗೆ ತಿಳಿದಿದ್ದಾಗ, ನೀವು:

    • ಮಾರುಕಟ್ಟೆ ಕರೆಕ್ಷನ್ ಸಮಯದಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸುತ್ತೀರಿ
    • ಕುಸಿತದ ಸಮಯದಲ್ಲಿ ಗಾಬರಿಯಾಗಿ ಮಾರಾಟ ಮಾಡುವುದಿಲ್ಲ,
    • ಅಲ್ಪ-ಅವಧಿಯ ಟ್ರೆಂಡ್‌ಗಳನ್ನು ಹಿಂಬಾಲಿಸುವುದಿಲ್ಲ.

ಸ್ಪಷ್ಟತೆ ಶಿಸ್ತನ್ನು ರಚಿಸುತ್ತದೆ.

ಒಂದು ಸರಳ ಉದಾಹರಣೆ

ಇಬ್ಬರು ಹೂಡಿಕೆದಾರರು, ಒಂದೇ ಮೊತ್ತ, ಒಂದೇ ಆದಾಯ (ವರ್ಷಕ್ಕೆ 12%), - ವಿವಿಧ ಹೂಡಿಕೆ ಅವಧಿ:

ಇನ್ವೆಸ್ಟರ್ ಹೂಡಿಕೆ ಅವಧಿ ಬಂಡವಾಳ ಅಂತಿಮ ಮೌಲ್ಯ (ಅಂದಾಜು.)*
ರಾಹುಲ್ 5 ವರ್ಷಗಳು ₹ 10,00,000 ₹ 17.62 ಲಕ್ಷ
ಆಶಾ 15 ವರ್ಷಗಳು ₹ 10,00,000 ₹ 54.74 ಲಕ್ಷ

ಒಂದೇ ಮೊತ್ತ.

ವಿವಿಧ ಫಲಿತಾಂಶಗಳು.

ಸಮಯದ ಶಕ್ತಿ ಇದಾಗಿದೆ.

ಕ್ಯಾಲ್ಕುಲೇಟರ್: https://www.mutualfundssahihai.com/en/calculators/lumpsum-investment-calculator/

ನಿಮ್ಮ ಹಣಕಾಸಿನ ಯೋಜನೆಯಲ್ಲಿ ಹೂಡಿಕೆಯ ಅವಧಿಯನ್ನು ಬಳಸುವುದು ಹೇಗೆ

  1. ನಿಮ್ಮ ಗುರಿಗಳನ್ನು ಪಟ್ಟಿ ಮಾಡಿ ಮತ್ತು ಅವುಗಳನ್ನು ಅಲ್ಪಾವಧಿ, ಮಧ್ಯಮ ಅಥವಾ ದೀರ್ಘಾವಧಿ ಎಂದು ವರ್ಗೀಕರಿಸಿ.
  2. ಹೂಡಿಕೆ ಅವಧಿಯನ್ನು ಮಾರ್ಗದರ್ಶಿಯಾಗಿ ಬಳಸಿ:
    • ಅಲ್ಪಾವಧಿ: ಬಂಡವಾಳವನ್ನು ರಕ್ಷಿಸಿ.
    • ಮಧ್ಯಮ-ಅವಧಿ: ಎಚ್ಚರಿಕೆ ಮತ್ತು ಬೆಳವಣಿಗೆಯನ್ನು ಸಮತೋಲನ ಮಾಡಿ.
    • ದೀರ್ಘಾವಧಿ: ದೀರ್ಘಾವಧಿಯ ಬೆಳವಣಿಗೆಗೆ ಆದ್ಯತೆ ನೀಡಿ.
  3. ಸಣ್ಣ ಮೊತ್ತವಾದರೂ ಪರವಾಗಿಲ್ಲ, ಬೇಗ ಆರಂಭಿಸಿ - ಸಮಯವು ಹಣವನ್ನು ಹೆಚ್ಚಿಸುತ್ತದೆ.
  4. ನಿಮ್ಮ ಆದಾಯ ಬೆಳೆದಂತೆ ಕಾಲಕಾಲಕ್ಕೆ ಹೂಡಿಕೆ ಮೊತ್ತವನ್ನು ಹೆಚ್ಚಿಸಿ.
  5. ನಿಮ್ಮ ಪೋರ್ಟ್‌ಫೋಲಿಯೋವನ್ನು ವಾರ್ಷಿಕವಾಗಿ ರಿವ್ಯೂ ಮಾಡಿ ಮತ್ತು ಗುರಿಗಳು ಹತ್ತಿರವಾದಂತೆ ಅದನ್ನು ಸರಿಹೊಂದಿಸಿ.
  6. ಖಚಿತವಾಗಿಲ್ಲದಿದ್ದರೆ, ಸಮಾಲೋಚಿಸಿ ಹಾಗೂ ‌ಸೆಬಿ-ನೋಂದಾಯಿತ ಹೂಡಿಕೆ ಸಲಹೆಗಾರರಿಂದ ಸಲಹೆ ಪಡೆಯಿರಿ:
    ಸೆಬಿ | ಮಾನ್ಯತೆ ಪಡೆದ ಮಧ್ಯವರ್ತಿಗಳು

ಕೊನೆಯ ಮಾತು: ಸಮಯವು ನೀವು ಹೊಂದಿರುವ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ಪಾಲುದಾರರಾಗಿದೆ

ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಆಯ್ಕೆ ಮಾಡುವ ಮೊದಲು, ನೀವು ಎಷ್ಟು ಸಮಯದವರೆಗೆ ಹೂಡಿಕೆ ಮಾಡಬಹುದು ಎಂಬುದನ್ನು ಮೊದಲು ನಿರ್ಧರಿಸಿ ಹಾಗೂ ''ಆತ್ಮನಿರ್ಭರ್ ಇನ್ವೆಸ್ಟರ್'' ಆಗಿರಿ.

ಏಕೆಂದರೆ ಹೂಡಿಕೆಯಲ್ಲಿ, ಮಾರುಕಟ್ಟೆಯಲ್ಲಿ ಯಾವಾಗ ಹೂಡಿಕೆ ಮಾಡಬೇಕು ಎಂಬುದು ಮುಖ್ಯವಲ್ಲ -
ಮಾರುಕಟ್ಟೆಯಲ್ಲಿ ಎಷ್ಟು ಸಮಯ ಹೂಡಿಕೆ ಮಾಡುತ್ತೀರಿ ಎಂಬುದು ಎಲ್ಲವನ್ನೂ ಬದಲಾಯಿಸುತ್ತದೆ.